Tuesday, October 23, 2018

ತಲೆ ಗಟ್ಟಿ ಇದೆ ಬಾ ಗೊಡೆಗೆ ಗುದ್ದಿಕೊಳ್ಳೊಣ ಅಂದದ್ದಕ್ಕೆ ಸಿದ್ದನಾದ ಗೆಳೆಯ "ನಾಗೋಸಾ ಸಿದ್ಲಿಂಗ್"

ನಾಗೋಸಾ ಸಿದ್ಲಿಂಗ್

ನನ್ನ ಆತ್ಮಿಯ ಗೆಳೆಯ, ಡುಬ್ ಚೆಂಡ್ ತಂಡ ಕೈಕೊಟ್ಟಮೆಲೆ ಡುಬ್ ಚೆಂಡ್ ಕತೆಯಲ್ಲಿ ಆತ್ಮೀಯರೆಲ್ಲ ಸೇರಿ ಹುಳಿಹಿಂಡಿದ ಮೆಲೆ. ತಲೆ ಮೆಲೆ ಬಂಡೆ ಬಿದ್ದವರ ಹಾಗೆ ಕೂತಿದ್ದ ನನಗೆ ಮೊದಲ ಬಲ ತುಂಬಿದ್ದು ನನ್ನ ಆತ್ಮೀಯ ಗೆಳೆಯ ನಾಗೋಸಾ ಸಿದ್ಲಿಂಗ್.
ಡುಬ್ ಚೆಂಡ್ ಕ್ಲಿನ್ ಬೊಲ್ಡಾಯ್ತು, ಚಿತ್ರ ಮಾಡಲು ಸಿದ್ದವಾಗ ನನ್ನ ತಂಡದಿಂದ 90% ಗೆಳೆಯರು ಆಸೆಗೆ ಬಲಿಯಾದರು 10% ಜನರು ನನ್ನ ಹತ್ತಿರ ಉಳಿದುಕೊಂಡ್ರು ಕಾರಭಾರಿ ಜೊತೆನೇ ಇರ್ತೆವೆ ಅಂತ ತಿರ್ಮಾನ ಮಾಡಿಕೊಂಡ ಆ 10% ಪ್ರತಿಷತ ಗೆಳೆಯರಿಗಾಗಿ ಎನಾದ್ರೂ ಮಾಡಬೇಕು ಮತ್ತು ಮಾಡಲೇ ಬೇಕು ಎಂಬ ಹಟಕ್ಕೆ ನಾ ಕಟ್ಟುಬಿದ್ದೆ, ಚಿತ್ರಕ್ಕೆ ಬಂಡವಾಳ ಹಾಕುವ ಗೆಳೆಯನನ್ನೆ ದುಷ್ಟ ಗೆಳೆಯನೊಬ್ಬ ಸಪಹರಿಸಿಬಿಟ್ಟ. ಇಂತಹ ಸಮಯದಲ್ಲಿ ಎನು ಮಾಡಬೆಕು ಎಂಬುದೇ ಅರ್ಥವಾಗುತ್ತಿರಲಿಲ್ಲ.
ನಾಗೋಸಾ ಸಿದ್ಲಿಂಗ್, ಕಾರಭಾರಿ ಎನೇ ಆಗಲಿ ಚಿತ್ರ ಮಾಡೊದೆ ನಾ ಯಾವತ್ತೂ ನಿಮ್ ಜೊತೆಗಿದ್ದೆನೆ, ತಲೆ ಹೋಳಾದರೂ ಪರವಾಗಿಲ್ಲ .ಸಿದ್ದತೆ ಮಾಡಿ ಅಂತ ಹುರಿದುಂಬಿಸಿದ.
ಬಂಡವಾಳವಿಲ್ಲ, ಚಿತ್ರೀಕರಣಕ್ಕೆ ಹಣವಿಲ್ಲ, ಇದ್ದ ಹಣವನ್ನು ತರಬೇತಿ ಅದು ಇದು ಅಂತ ಉಡಿಸ್ ಮಾಡಿದ್ದಾಯ್ತು, ಇನ್ನೆಲ್ಲಿಯ ಚಿತ್ರ ಅಂತ ಅನ್ಕೊಂಡೆ ಆದ್ರೆ ನನ್ನಲ್ಲುಳಿದ 10% ಗೆಳೆಯರು ಅನ್ನೊ ವಿಚಾರ ಮತ್ತೆ ಕೆದಕಲು ಸುರು ಆಯ್ತು,
ಆಗ ಹೊಳೆದಿದ್ದೆ ಅದ್ಬುತ ಆಲೊಚನೆ "ಜನಕ"
ನನ್ನ ಗೆಳೆಯನೊಬ್ಬ ಹೆಳಿದ ನಾಲ್ಕು ಸಾಲಿನ ಮಾತು
"ಅಪ್ಪ ಮಕ್ಕಳನ್ನು ಎಷ್ಟು ಪ್ರೀತಿಸ್ತಾರೆ" ಎಂಬ ವಿವರಣೆಯನ್ನು ನಾಲ್ಕು ಸಾಲಲ್ಲಿ ಹೆಳಿದ ಆ ನಾಲ್ಕು ಸಾಲುಗಳು ನಲವತ್ತು ಪುಟಗಳಾದವು ಕೊನೆಗೆ "ಜನಕ" ಕಿರುಚಿತ್ರ ಅಂತ ಆಲೊಚಿಸಿಕೊಂಡೆವು

ಕಿರುಚಿತ್ರದ ಆಲೊಚನೆ ಟೆಲಿಚಿತ್ರವಾಗಿ ಮಾರ್ಪಟ್ಟಿತು
ಮುಂದೆ ಟೆಲಿಚಿತ್ರ 2:30 ಘಂಟೆಯ ದೊಡ್ಡಚಿತ್ರವಾಗಿ ಸಿದ್ದವಾಗಲು ಆಲೊಚಿಸಿತು.

ಆಲೊಚನೆಗಳು ತನ್ನ ಪಾಡಿಗೆ ತಾನು ಆಲೊಚಿಸುತ್ತಲೇ ಇತ್ತು
ಜನಕ ಚಿತ್ರಕ್ಕಾಗಿ 10% ಗೆಳೆಯರು ಮತ್ತು ಇನ್ನುಳಿದ ಗೆಳೆಯರೊಂದಿಗೆ ಮಾತುಕತೆಗೆ ಸಿದ್ದವಾದೆ ಕೊನೆಗೆ
ಬಂಡವಾಳವಿಲ್ಲದೆ ಬಂಡವಾಳದ ಆಲೊಚನೆ ಮಾಡದೆ
ಜನಕ ಚಿತ್ರೀಕರಣ ಆರಂಬವಾಯ್ತು.
ಜನಕನಲ್ಲೂ ಅಡ್ಡಿಗಳು ಅಡ್ಡಗೊಡೆಮೆಲೆ ದೀಪವಿಟ್ಟಂತೆ ಬಂದೊದಗಿದವು.
ಈ ಮದ್ಯ ಗೆಳೆಯ ನಾಗೋಸಾ ಇವರಿಗೆ ಹೆಣ್ಣುಮಗುವಾಯ್ತು,
ಮನೆಯಲ್ಲಿ ಸಹಿಸಲಾಗದ ಅಕಲಾಟವಿದ್ದರೂ ಜನಕನ ಚಿತ್ರೀಕರಣದಲ್ಲಿ ನಗುಮೊಗದಿಂದ ಉತ್ಸಾಹದಿಂದ ತಲೆ ಗಟ್ಟಿಇದೆ ಎಂದು ಗೊಡೆಗೆ ಗುದ್ದಿಕೊಂಡ ನಾಗೋಸಾ ಜನಕ ಚಿತ್ರದ ನಿಜವಾದ ನಾಯಕ

ಪರಿಪೂರ್ಣವಾದ ಗೆಳೆತನ ಅಂದ್ರೆ ಎನು ಅಂತ ಜನಕನ ಮೂಲಕ ನನಗೆ ತಿಳಿಯಿತು

ಅಪ್ಪು, ರಾಜು,ದೀಪ, ಜಿಯಾ, ಚಿನ್ನು, ಸೌಮ್ಗ, ಪ್ರೀಯಾಂಕ ಇನ್ನೂ ಹಲವರು ತಮ್ಮ ಅತ್ಯಮೂಲ್ಯ ಸ್ನೇಹವನ್ನು
ಬಿಂಬಿಸಿದವರು
ಯಲ್ಲರ ಬಗ್ಗೆ ಜನಕನ ಅನುಭವ ಹಂಚಿಕೊಳ್ಳುತ್ತೆನೆ.

ಆದ್ರೆ ಒಂದ ಮಾತು
ಲವ್ ಯೂ ನಾಗು

ರಾ ದೇ ಕಾರಭಾರಿ 

No comments:

Post a Comment

ಜನಕನಲ್ಲಿ ನಿಮ್ಮ ಕಾರಭಾರಿ ಕಾಣಿಸಿಕೊಂಡಿದ್ದು ಹಿಗೆ

ಜನಕ ಚಲನಚಿತ್ರ ಯಲ್ಲಾ ಹೊಸ ಮುಖಗಳನ್ನೇ ಹಾಕಿಕೊಂಡಿ ನಿರ್ಮಿಸಿದ ಚಿತ್ರ ಡುಬ್ ಚೆಂಡ್ ಚಿತ್ರದಲ್ಲಿ ಒಂದೇ ದೃಷ್ಯದಲ್ಲಿ ಕಳ್ಳ ಸ್ವಾಮಿಯ ಗೆಟಪ್ ನಲ್ಲಿ ಕಾಣಿಸಿಕೊಳ್ಳಬೆಕೆಂ...