Wednesday, October 24, 2018

ಜನಕನಲ್ಲಿ ನಿಮ್ಮ ಕಾರಭಾರಿ ಕಾಣಿಸಿಕೊಂಡಿದ್ದು ಹಿಗೆ

ಜನಕ ಚಲನಚಿತ್ರ ಯಲ್ಲಾ ಹೊಸ ಮುಖಗಳನ್ನೇ ಹಾಕಿಕೊಂಡಿ ನಿರ್ಮಿಸಿದ ಚಿತ್ರ
ಡುಬ್ ಚೆಂಡ್ ಚಿತ್ರದಲ್ಲಿ ಒಂದೇ ದೃಷ್ಯದಲ್ಲಿ ಕಳ್ಳ ಸ್ವಾಮಿಯ ಗೆಟಪ್ ನಲ್ಲಿ ಕಾಣಿಸಿಕೊಳ್ಳಬೆಕೆಂದಿದ್ದೆ, ಕಲಾವಿಧರು ಕೈಕೊಟ್ ಹೊಗೊದನ್ನ ನೋಡಿ ಕೊನೆಗೆ ಜನಕನಲ್ಲಿ ನಾನೇ ತಂದೆಯ ಪಾತ್ರ ಮಾಡಲು ಸಜ್ಜಾದೆ, ಹೆಗೆ ಕಾಣಿಸ್ತಿನೋ ಎನೋ ಎಂಬ ಅಳುಕಿತ್ತು.
ಆದ್ರೆ ಪಾತ್ರ ನಿರ್ವಹುಸುವಾಗ ನಮ್ ತಂಡ ತೆಗೆದ ಸ್ಟಿಲ್ ಪೋಟೊಗಳಲ್ಲಿ ನಾ ಕಾಣಿಸಿಕೊಂಡಿದ್ದು ಹಿಗೆ.
ಆಗ ಅನ್ನಿಸಿದ್ದು ನಾ ಹಿಗಿದ್ದೆನಾ?
ಮದ್ಯ ವಯಸ್ಕ ತಂದೆಯಾಗಿ 
ಕುಡಿತದ ಅಮಲಿನಲ್ಲಿ 
ಯೌವನದಲ್ಲಿ ನಾಯಕಿಯೊಂದಿಗೆ
ನಾನವನಲ್ಲ ನಾನವನಲ್ಲ ನಾನವನಲ್ಲ ಅಂತ ಎಷ್ಟೇ ಹೆಳಿದರೂ 100% ಇದು ನಾನೇ ಅನ್ನೊದು ಕನಫರ್ಮ ಆಗೊಯ್ತು 
ಈ ಪೋಟೊಗೆ ನನ್ ತಂಡ ನನಗೆ ಕರೆದದ್ದು 
ರಾದೇನಂದ ಮಹಾರಾಜ 
ಇದು ನಿಮ್ಮ ಗೆಳೆಯನ ಹೊಸ ಗೆಟಪ್ 


ಈ ಗೆಟಪ್ ನೊಡಿ ತುಂಬಾ ಜನಕ್ಕೆ ಕೆಂಪು ಮೆಣಸಿನಕಾಯಿ ನೆನಪಾಗ್ತಾಇದೆ ಅನ್ನೊದಂತೂ 100%ಗ್ಯಾರೆಂಟಿ 

ನಿಮ್ಮ ಗೆಳಯ 

ರಾ ದೇ ಕಾರಭಾರಿ 






ಜಿಯಾ v/s ರಜಿಯಾ ಕಾರಭಾರಿಯ ಮುದ್ದಿನ ಮಗಳು "ಜನಕ" ನಿಗಿವಳೇ ಕೆಂದ್ರಬಿಂದು

ಜಿಯಾ v/s ರಜಿಯಾ
ನಿಮ್ಮ ಕಾರಭಾರಿಯ ಮುದ್ದಿನ ಮಗಳು,
ಜನಕ ಚಲನಚಿತ್ರದಲ್ಲಿಯೂ ಇವಳೇ ಕೆಂದ್ರಬಿಂದು.
ಬಾಲ್ಯದಿಂದಲೂ ನನ್ನ ಕೈಲಿ ಬೆಳೆದವಳು ನಾ ಎತ್ತಿ ಆಡಿಸಿದ ಹುಡುಗಿ, ನನ್ನ ಆತ್ಮೀಯ ಗೆಳೆಯ ಸೈಯದ್ ನ ತಂಗಿ ಮಗಳು.
ಸೈಯದ ಕಿಲಾಡಿ ನನ್ಮಗ ಆದ್ರೆ ನನ್ ಜೀವದ ಗೆಳೆಯ, ನಾನೂ ಮತ್ತು ಅವನು ಸೇರಿ ಮಾಡದ ಕಿಲಾಡಿ ಕೆಲಸಗಳೇ ಇಲ್ಲ. ಗೆಳೆಯ ಸೈಯದ್ ಈಗ ನಮ್‌ ಜೊತೆ ಇಲ್ಲ ಅವನು ಇದ್ದಿದ್ದರೆ ಖುಷಿಪಡ್ತಿದ್ದ, ನನ ಗೆಳೆಯನ ಮಗಳು ನನ್ನ ಮಗಳು ಜನಕನಲ್ಲಿ ನನ್ನ ಮಗಳೇ ಹಿರೊಯಿನ್.
ನಾನು ನನ್ ಮಗಳು ಚಿತ್ರ ನಿರ್ಮಾಣಕ್ಕಾಗಿ ವರ್ಷಾನುಗಟ್ಟಲೇ ಓಡಾಡಿದೆವು.
ಡುಬ್ ಚೆಂಡ್ ಚಿತ್ರ ನಿರ್ಮಾಣಕ್ಕೆ ಸಜ್ಜು ಮಾಡಿಕೊಂಡು ನಾನು ನನ್ ಮಗಳು ಹಗಲು ರಾತ್ರಿ ಯನ್ನದೆ ತಿರುಗಿದ್ದೆ ತಿರುಗಿದ್ದು.


ಡುಬ್ ಚೆಂಡ್ ಆಡಿಷನ್ ನಿಂದ ಹಿಡಿದು ತರಬೇತಿ ಆಡಿಯೊ ರಿಲಿಜ್ ಹಿಗೆ ಎಲ್ಲಾ ಕಡೆಯೂ ಊಟ ನೀರು ಬಿಟ್ಟು ತಿರುಗಿ ತಿರುಗಿ ಉತ್ದಾಹದಿಂದ ಡುಬ್ ಚೆಂಡ್ ಚಿತ್ರದ ಚಿತ್ರೀಕರಣದ ವ್ಯವಸ್ಥೆ ಮಾಡಿಕೊಂಡ ಮೆಲೆ ನಮ್ ತಂಡದಲ್ಲಿ ಹಿಂಬಾಗಿಲಿನಿಂದ ಸೇರಿಕೊಂಡ ಗದುಗಿನ ಪತ್ರಕರ್ತನೊಬ್ಬನ ಹೊಟ್ಟೆಯುರಿಗೆ ಇಡಿ ತಂಡವೇ ಕೈಕೊಟ್ಟು ಹೊದಾಗ ಹೆಬ್ಬಂಡೆ ತಲೆಮೆಲೆ ಬಿದ್ದವರ ತರಹ ಕುಳಿತ ನನಗೆ ಸಮಾಧಾನ ಮಾಡಿದವಳು ನನ್ ಮುದ್ದು ಮಗಳು ಜಿಯಾ.
ಇನ್ನೆನು ಚಿತ್ರದ ಕನಸು ನುಚ್ಚಾಯ್ತು ಅಂದುಕೊಂಡಾಗ "ಎನಾಗಲಿ ಮುಂದೆ ಸಾಗೊಣ, ನಂಬಿದವರೆಲ್ಲ ನಂಬಿಗಸ್ತರಲ್ಲ ಈ ಬಾಳಲಿ, ಸೂರ್ಯ ಮುಳುಗಿದಾಕ್ಷಣ ಅದು ಶಾಶ್ವತ ಕತ್ತಲಲ್ಲ ಬೆಳಿಗ್ಗೆ ಮತ್ತೆ ಸೂರ್ಯ ಉದಯಿಸಲೇ ಬೆಕು, ಟಿಮ್ ಕೈಕೊಟ್ಟಿದ್ದು ಕೇವಲ ಸೂರ್ಯನಿಗೆ ಅಡ್ಡವಾದ ಮೋಡದಂತೆ, ಸೂರ್ಯ ತನ್ನ ಪ್ರಕಾಶವನ್ನು ಯಾವತ್ತೂ ನಿಲ್ಲಿಸೊಲ್ಲ ಎಂಬಂತಹ ಮಾತುಗಳ ಮೂಲಕ ನನಗೆ ಮರು ಉತ್ತೆಜನ ನಿಡಿದಳು ನನ್ ಮುದ್ದು ಮಗಳು ಜಿಯಾ.
ಜನಕ ಚಿತ್ರದಲ್ಲಿ ನಾಯಕಿಯ ಪಾತ್ರ ಚಿತ್ರದಲ್ಲಿಯೂ ನನ್ ಮಗಳ ಪಾತ್ರ ನಿರ್ವಹಿಸುತ್ತಿದ್ದಾಳೆ ಜಿಯಾ.
ಕಾರಭಾರಿ ಮೊಷನ್ಸ ಸಂಸ್ಥೆಯ ನಿರ್ಮಾಣದ ನಮ್ಮ ಮುಂದಿನ ಚಿತ್ರಗಳಾದ
*ಡುಬ್ ಚೆಂಡ್" ನಲ್ಲಿ ನಾಯಕಿಯಾಗಿ
*ದೇವಸೂಳೆ" ನಲ್ಲಿಯೂ ನಾಯಕಿಯಾಗಿ ಅಭಿನಯಿಸುತ್ತಿದ್ದಾಳೆ,
ಚಲನಚಿತ್ರ ಜಗತ್ತಿಗೆ ಒಂದು ಉದ್ಬುತ ನಾಯಕಿಯನ್ನು ಪರಿಚಯಿಸಿತ್ತಿದೆ ಕಾರಭಾರಿ ಸಂಸ್ಥೆ

ಲವ್ ಯೂ ಮಗಳೆ


ಜನಕನ ಮುದ್ದು ಮಗಳಾಗಿ ಮೈಸೂರಿನ ಲಕ್ಷ್ಮಿ (ಚಿನ್ನು)

ರಕ್ತ ಸಂಬಂದಗಳು ರಕ್ತಸಿಕ್ತವಾಗ್ತದೆ ಆತ್ಮಸಂಬಂದಗಳು ತನ್ನ ಆಸ್ತಿತ್ವ ಕಾಯ್ದುಕೊಳ್ತದೆ.

ನನ್ನ ಮುದ್ದು ಮಗಳು ಲಕ್ಷ್ಮಿ ಡುಬ್ ಚೆಂಡ್ ಚಿತ್ರಕ್ಕಾಗಿ ಮೈಸೂರಿನಿಂದ ಗದಗ ಬಂದಳು
ಮೈಸೂರಿನ ಮುದ್ದು ಹುಡುಗಿ ಪೋನನಲ್ಲೇ ನನ್ನ ಮುದ್ದಿನ ಮಗಳಾಗಿ ಪರಿವರ್ತನೆಗೊಂಡಳು, ಗದಗ ಬರುತ್ತಿದ್ದಂತೆಯೆ ಅವಳು ಉದ್ಗರಿಸಿದ ಮೊದಲ ಪದ "ಡ್ಯಾಡಿ" ಮುದ್ದುಮುದ್ದಾಗಿ ಮಾತಾಡೊ ಲಕ್ಷ್ಮಿ (ಚಿನ್ನು) ನನ್ನ ಮನದಲ್ಲಿ ಮನೆ ಮಾಡಿಕೊಂಡಳು,
ಡುಬ್ ಚೆಂಡ್ ತಂಡ ಕೈಕೊಟ್ಟಾಗ ಹತ್ತಿರದಿಂದ ನಮ್ಮ ನೂವುಗಳನ್ನ ನೋಡಿದವಳು "ಹೆ ಡ್ಯಾಡಿ ಯಾಕೆ ಟೆನಷನ್ ಮಾಡ್ಕೊತಿರಾ ಅವರಿಲ್ಲ ಅಂದ್ರೆ ಮತ್ತೊಬ್ಬರು" ಅಂತ ನಗುನಗುತ್ತ ಸಂತೈಸಿದವಳು
ನನಗೆ ಮಕ್ಕಳಿಲ್ಲ ಇದ್ದ ಮಕ್ಕಳು ಯೇಸುವಿನೊಂದಿಗೆ ಓಡಿ ಹೊದರು ನನಗೆ ಮಕ್ಕಳ ಪ್ರೀತಿ ಕೊಡಲು ಮೈಸೂರಿನ ಚಾಮುಂಡಿ ತಾಯಿ ಲಕ್ಷ್ಮಿಯ (ಚಿನ್ನು) ಅವತಾರ ತಾಳಿ ಬಂದಂತಾಯ್ತು.
ಡ್ಯಾಡಿ ಹೊಸ ಆಡಿಷನ್ ಮಾಡೊಣ ನಾ ನಿಮ್ ಜೊತೆನೆ ಇರ್ತಿನಿ ಅಂತ ಮುದ್ದ ಮುದ್ದಾಗಿ ಹೆಳಿದಳು,
ನಾಗೊಸಾ, ದೀಪ, ಜಿಯಾ ಮತ್ತು ಗಳೆಯರೆಲ್ಲ ಸೇರಿ "ಜನಕ" ನನ್ನು ಹುಟ್ಟಿಸಿದಾಗ ಡ್ಯಾಡಿ ಜನಕದಲ್ಲಿ ಅಭಿನಯ ಮಾಡೊ ಯಾರಿಗೂ ಪ್ರಮಾಣಪತ್ರ ಈಗಲೇ ಕೊಡಬೇಡಿ ಡುಬ್ ಚೆಂಡ್ ಟಿಮ್ ಮಾಡಿದ ಹಾಗೆ ಮಾಡಿದ್ರೆ ಮತ್ತೆ ಟೆನಷನ್ ಮಾಡ್ಕೊತಿರಾ ಅಂತ ಮುದ್ದು ಮುದ್ದಾಗಿ ಸಲಹೆ ನಿಡಿದಳು,
ಇಷ್ಟು ಚಿಕ್ಕ ಹುಡುಗಿ ಎಷ್ಟೆಲ್ಲ ಆಲೊಚನೆ ಮಾಡ್ತಾಳೆ ಅಂತ ಚ್ಚರಿಯಾಯ್ತು ಪ್ರೀತಿಯಿಂದ ತಬ್ಕೊಂಡ್ ಲವ್ ಯೂ ಮಗಾ ಅಂದೆ.
ಜನಕ ಚನಲಚಿತ್ರದಲ್ಲಿ ನನ್ ಮುದ್ದು ಮಗಳು ಚಿನ್ನು ನಿರ್ವಹಿಸುತ್ತಿರುವುದು ಜನಕನ ಮಗಳ ಪಾತ್ರ.
ಕೊನೆಯ ಮಗಳ ಪಾತ್ರ ಇದೊಂದು ವಿಶೇಷವಾದ ಪಾತ್ರ
ಅಕ್ಕ ಕುರುಡು ಪ್ರೀತಿಗೆ ಬಲಿಯಾಗಿ ಹೊದ್ರೆ ಅಣ್ಣ ಹುಡುಗಿಯೊಬ್ಬಳ ತೆಕ್ಕೆಗೊರಗುತ್ತಾನೆ ಅಪ್ಪನ ಮುದ್ದು ಮಗಳು "ವಿಚಿತ್ರ" ಅಪ್ಪನ ಪ್ರೀತಿಯೊಂದನ್ನೇ ಬಯಸುತತಾಳೆ ಅವಳಿಗೆ ಅಪ್ಪ ಬಿಟ್ರೆ ಪ್ರಪಂಚವಿಲ್ಲ. ಜನಕನ ಮೂಲಕ ಮುದ್ದು ಮಗಳು ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತಿದ್ದಾಳೆ
ಕಾರಭಾರಿ ಮೋಷನ್ಸ ನನ್ನ ಸಂಸ್ಥೆ ನನ್ನ ಡ್ಯಾಡ್ ಕಟ್ಟಿದ ಸಂಸ್ಥೆ ಇದನ್ನು ಯಾವತ್ತೂ ಮುಳುಗಲು ಬಿಡಲ್ಲ ಅಂತ ಪೆದ್ದು ಪೆದ್ದಾಗಿ ಹೆಳುವ ಚಿನ್ನು ನಮ್ಮ ಸಂಸ್ಥೆಯ ಮುಂದಿನ ಚಿತ್ರ "ಮರ್ಯಾದಾ ಹತ್ಯೆ ಯಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾಳೆ.
ನನ್ ಮುದ್ದುಮಗಳ ಪ್ರೀತಿಗೆ ಪಾತ್ರನಾದವನು ನಾನು
ನಾನು ನನ್ನ ವಿನುತಾಳೊಂದಿಗೆ ಮಿಸ್ ಮಾಡಿಕೊಂಡಿದ್ದ ದಿನಗಳನ್ನು ಚಿನ್ನು ನನಗೆ ಕೊಟದಟಳು

ಚಿನ್ನು ಹೊ ನನ್ನ ಮುದ್ದು ಮಗಳೇ
ಯಾವತ್ತೂ ಈ ನಿನ್ನಪ್ಪನ ಬಿಟ್ ಹೊಗಬೇಡ ಅಂತ ಮಾತ್ರ ಹೆಳಬಲ್ಲೆ.

ನಾ ಚಿತ್ರ ನಿರ್ದೇಶಕ ಅನ್ನೊದಕ್ಕಿಂತ ಮಕ್ಕಳ ತಂದೆ ಅಂತ ಗುರುತಿಸಿಕೊಂಡಿದ್ದಕ್ಕೆ ಹೆಮ್ನೆ ಪಡುತ್ತೆನೆ.

ಲವ್ ಯೂ ಮಗಳೆ

ರಾ ದೇ ಕಾರಭಾರಿ

Tuesday, October 23, 2018

ದೀಪವೂ ನಿನ್ನದೆ ಗಾಳಿಯೂ ನಿನ್ನದೆ ಆರದಿರಲಿ ಬೆಳಕು ಎಂಬ ಸುಂದರ ಸಾಲಿನಂತೆ ನನ್ನ ಜೀವದ ಗೆಳತಿ ದೀಪ ಬೆನ್ನು ತಟ್ಟಿ ಹುರಿದುಂಬಿಸಿದಳು

ದೀಪವೂ ನಿನ್ನದೆ ಗಾಳಿಯೂ ನಿನ್ನದೆ ಆರದಿರಲಿ ಬೆಳಕು 
ಎಂಬ ಸುಂದರ ಸಾಲಿನಂತೆ
ನನ್ನ ಜೀವದ ಗೆಳತಿ ದೀಪ ಬೆನ್ನು ತಟ್ಟಿ ಹುರಿದುಂಬಿಸಿದಳು 

ದೀಪ ಆರಲು ಬಂದಿತ್ತು ಉತ್ಸಾಹ ಕುಗ್ಗಲು ಬಂದಿತ್ತು ಗೆಳೆಯರೆಲ್ಲ ಆಸೆಗೆ ಬಲಿಯಾದರಲ್ಲ ಅಂತ ಮನಸ್ಸು ಅಳುತ್ತಿತ್ತು, ಡುಬ್ ಚೆಂಡ್ ಕೈತಪ್ಪಿಹೊಯ್ತು ನನ್ನ ತಂಡ ಒಡೆದುಹೊಯ್ತು, ಎನೋ ಮಾಡಲು ಬಂದವರು ಇನ್ನೆನೋ ಮಾಡಿಕೊಂಡು ಹೊದರು, 
ಉಸಿರುಗಟ್ಟಿದ ವಾತಾವರಣ, ಇನ್ನೆನು ಉಸಿರು ನಿಲ್ಲುತ್ತೆನೋ ಅನ್ನೊ ಸಮಯ, ಪಕ್ಕನೇ ದೀಪ ಆರಿಬಿಡುತ್ತೆನೋ ಜೀವ ಹೊಗಿಬಿಡುತ್ತೆನೊ ಎಂಬ ಕಳವಳ, ಸಮಾಧಾನ ಹೆಳೊರಾರಿಲ್ಲದ ಪರಿಸ್ಥಿತಿ, ನಾವಿರುವ ಒಂದೆರಡು ಜನ ಎನು ತಾನೆ ಮಾಡೊಕೆ ಸಾದ್ಯ ಅನ್ನೊ ಚಿಂತೆ.
ಕಣ್ಣಿರು ತನ್ನಿಂತಾನೆ ಕಣ್ಣಿಂದ ಜಾರಿ ಬರುತ್ತಿತ್ತು "V" ಯಾಕೊ ಹಿಗೆ ಕುಳಿತಿದ್ದಿಯ ಆಗೊದೆಲ್ಲ ಒಳ್ಳೆಯದಕ್ಕೆ ಅವರೆಲ್ಲ ಈಗ ಬಿಟ್ಟುಹೊಗಿದ್ದೆ ಸರಿ ಚಿತ್ರೀಕರಣ ಆರಂಬವಾಗಿ ಅರ್ದಕ್ಕೆ ಬಿಟ್ ಹೊಗಿದ್ರೆ ಎನ್ಮಾಡ್ತಿದ್ದೆ, ಎದ್ದೆಳೊ ಮೆಲೆ ನನ್ ಗೆಳೆಯ ಯಾವತ್ತೂ ಸೊತವನಂತೆ ಕೊತ್ಕೊಬಾರದು ಸೋಲೆಂಬುದು ನನ್ನ ಗೆಳೆಯನ ಹತ್ತಿರಕ್ಕೂ ಸುಳಿಯಬಾರದು "V" ನಿನ್ನಿಂದ ಅಸಾದ್ಯವಾದದ್ದು ಯಾವುದು ಇಲ್ಲ ಕಣೊ ಸಾಧಿಸಿಯೇ ಸಾದಿಸುತ್ತಿಯ, ಹಿಗೆ ಕೂತ್ಕೊಂಡ್ರೆ ಎನೂ ಸಾಧಿಸೊಕೆ ಆಗಲ್ಲ. ಹಿಗೆ ಹಾಗೆ ಅಂತ ಸಾದಿಸೊಕೆ ಮುನ್ನುಗ್ಗುವ ಹಾಗೆ ಹುಚ್ಚೆಬ್ಬಿಸಿದಳು. 

ದೀಪ ನನ್ನ ಜೀವದ ಗೆಳತಿ ಕಣ್ರಿ, ಎನಾದರೊಂದು ಕಾರಣ ಅಥವಾ ಉದ್ದೆಶ ಇಟ್ಟುಕೊಂಡು ಗೆಳೆತನ ಮಾಡುವ ಈ ಕಾಲದಲ್ಲಿ ನನ್ ಗೆಳತಿ ದೀಪ ವಿಶೇಷವಾದವಳು ಕಣ್ರಿ ನಾನು ಮತ್ತು ದೀಪ ಒಳ್ಳೆಯ ಗೆಳೆಯರು ನಮ್ಮದು ಪವಿತ್ರವಾದ ಗೆಳೆತನ ಅಂತ ಹೆಳಲು ಖುಷಿಯಾಗುತ್ತೆ. 
ದೀಪ ಕಲಾವಿದೆಯಲ್ಲ ಅವಳು ನನ್ನ ಸ್ಪೂರ್ತಿ ಅವಳು ನನ್ನ ತಾಯಿ ಅವಳು ನನ್ನ ತಂಗಿ ಅವಳು ನನ್ನ ಉಸಿರು ಅವಳು ನನಗೆಲ್ಲಕ್ಕಿಂತ ಮಿಗಿಲಾದವಳು 
ಕೆಲವೊಮ್ಮೆ ಪ್ರೀತಿಸ್ತಾಳೆ ಕೆಲವೊಮ್ಮೆ ಮುನಿಸಿಕೊಳ್ತಾಳೆ ಕೆಲವೊಮ್ಮೆ ಬೈದು ಬುದ್ದಿ ಹೆಳ್ತಾಳೆ 
ಮಗುಮನಸ್ಸಿನವಳವಳು 
ಕಲಾವಿದೆಯಲ್ಲದಿದ್ದರೂ ಜನಕ ಚಿತ್ರದಲ್ಲಿ ತಾಯಿಯ ಪಾತ್ರ ನಿರ್ವಹಿಸುತ್ತಿದ್ದಾಳೆ
 ಜನಕನ ಮಡದಿಯಾಗಿ 
ಮಕ್ಕಳ ತಾಯಿಯಾಗಿ 
ನನಗೆ ಅತ್ಯಮೂಲ್ಯ ಗೆಳತಿಯಾಗಿ ಕಾಣಿಸಿಕೊಂಡಿದ್ದಾಳೆ 

ದೀಪ ನಿನ್ನ ಪ್ರೀತಿಗೆ ನಿನ್ನ ಪ್ರೋತ್ಸಾಹಕ್ಕೆ ನಿನ್ನ ಅಭಿಮಾನಕ್ಕೆ ಸೋತವನು ನಾನು 
ಜನುಮ ಜನುಮದಲ್ಲೂ ನಿ ನನಗೆ ಗೆಳತಿಯಾಗಿಯೆ ಬಾ 

ರಾ ದೇ ಕಾರಭಾರಿ 


ಜನಕನಿಗೆ ಯಾರು ನಿಜವಾದ ಜನಕ

ಒಂದು ಕೆಜಿ ಉಪ್ಪು ತಗೊಳ್ಳಬೆಕೆಂದರೂ ಅದಕ್ಕೆ ತಕ್ಕಷ್ಟು ಹಣ ಬೆಕು, ದೇವರಿಗೆ ದೀಪ ಹಚ್ಚಬೆಕಂದರೂ ಎಣ್ಣೆಗೆ ಹಣ ಬೆಕು, ದೇವಸ್ಥಾನಕ್ಕೆ ಹೊಗೊ ಮೊದಲು ಎಣ್ಣೆಕಾಯಿಕರ್ಪೂರಕ್ಕಾದರೂ ಹಣವಿದೆಯೋ ಅಂತ ಆಲೊಚಿಸಿಕೊಂಡು ದೇವಸ್ಥಾನಕ್ಕೆ ಹೊಗ್ತೆವೆ ಆದರೆ ಜನಕ ಆರಂಬಿಸುವ ಮೊದಲು ಇದ್ಯಾವುದನ್ನು ಆಲೊಚಿಸಲಿಲ್ಲ ಕಾರಣ ನನ್ನ ತಂಡ ನನಗೆ ಕೊಟ್ಟ ಪ್ರೋತ್ಸಾಹ.
ಡುಬ್ ಚೆಂಡ್ ಚಿತ್ರಕ್ಕೆ ಕೆ ಎಫ ರಾಜು 120೦0/- ರೂಪಾಯಿ ಖರ್ಚು ಮಾಡಿ ಹಾಡು ಮಾಡಿಸಿದ
ಒಡ ಒಡ ಒಡ ಬಂ ಬಂ ಬೋ
ಮತ್ತು
ದಮ್ ಹೊಡ್ದವ್ನು ದೇವರ ಮಗನೊ ಹೊಡೆಯದಿರವ್ನು ಮಂಗನ ಮಗನೊ
ಎಂಬ ಎರಡು ಸುಂದರ ಹಾಡುಗಳಿಗೆ ಅಂತಿಮ ಲೆಪನ ಕೊಟ್ಟ ರಾಜು ಈಗ ನಮ್ಮ ಜೊತೆ ಇಲ್ಲ ಸನ್ನೊದೆ ಬೆಜಾರಿನ ಸಂಗತಿ

ನಾನು ರಚಿಸಿರುವ ಸಾಹಿತ್ಯಕ್ಕೆ
ವಿರೇಶ ಹನಾಬಾದಿ ಹಾಡಿದ್ದಾರೆ ಮತ್ತು ವಿಕ್ಟರ ಜಿತ್ ಸಂಗಿತ ಸಂಯೋಜನೆ ಮಾಡಿದ್ದಾರೆ
ಡುಬ್ ಚೆಂಡ್ ಚಿತ್ರೀಕರಣಕ್ಕೆ ವಿಗ್ನಗಳು ಬಂದೊದಗಿದರೂ ಎರಡು ಹಾಡುಗಳು ಸಿದ್ದವಾಗಿ ನಿಂತಿದೆ

ಡುಬ್ ಚೆಂಡ್ ತನ್ನ ಟಿಮ್ ಕಳೆದುಕೊಂಡ ಬಳಿಕ "ಜನಕ" ನ ಉದಯ
ಜನಕ ನ ನಿಜವಾದ ಜನಕ ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಹೊದಾಗ ಸಿಗುವುದು ಎರಡು ಹೆಸರು
೧) ನಾಗೋಸಾ ಸಿದ್ಲಿಂಗ್
೨) ಡಾರ್ಲಿಂಗ್ ಅಪ್ಪು

ನಾಗೋಸಾ ಬಗ್ಗೆ ಇಗಾಗ್ಲೆ ಹೆಳಿದ್ದೆನೆ ಡಾರ್ಲಿಂಗ್ ಅಪ್ಪು ಯಾರು ಎಂಬುದನ್ನ ಈಗ ಹೆಳುತ್ತೆನೆ

ರಾ ದೇ ಕಾರಭಾರಿ 

ತಲೆ ಗಟ್ಟಿ ಇದೆ ಬಾ ಗೊಡೆಗೆ ಗುದ್ದಿಕೊಳ್ಳೊಣ ಅಂದದ್ದಕ್ಕೆ ಸಿದ್ದನಾದ ಗೆಳೆಯ "ನಾಗೋಸಾ ಸಿದ್ಲಿಂಗ್"

ನಾಗೋಸಾ ಸಿದ್ಲಿಂಗ್

ನನ್ನ ಆತ್ಮಿಯ ಗೆಳೆಯ, ಡುಬ್ ಚೆಂಡ್ ತಂಡ ಕೈಕೊಟ್ಟಮೆಲೆ ಡುಬ್ ಚೆಂಡ್ ಕತೆಯಲ್ಲಿ ಆತ್ಮೀಯರೆಲ್ಲ ಸೇರಿ ಹುಳಿಹಿಂಡಿದ ಮೆಲೆ. ತಲೆ ಮೆಲೆ ಬಂಡೆ ಬಿದ್ದವರ ಹಾಗೆ ಕೂತಿದ್ದ ನನಗೆ ಮೊದಲ ಬಲ ತುಂಬಿದ್ದು ನನ್ನ ಆತ್ಮೀಯ ಗೆಳೆಯ ನಾಗೋಸಾ ಸಿದ್ಲಿಂಗ್.
ಡುಬ್ ಚೆಂಡ್ ಕ್ಲಿನ್ ಬೊಲ್ಡಾಯ್ತು, ಚಿತ್ರ ಮಾಡಲು ಸಿದ್ದವಾಗ ನನ್ನ ತಂಡದಿಂದ 90% ಗೆಳೆಯರು ಆಸೆಗೆ ಬಲಿಯಾದರು 10% ಜನರು ನನ್ನ ಹತ್ತಿರ ಉಳಿದುಕೊಂಡ್ರು ಕಾರಭಾರಿ ಜೊತೆನೇ ಇರ್ತೆವೆ ಅಂತ ತಿರ್ಮಾನ ಮಾಡಿಕೊಂಡ ಆ 10% ಪ್ರತಿಷತ ಗೆಳೆಯರಿಗಾಗಿ ಎನಾದ್ರೂ ಮಾಡಬೇಕು ಮತ್ತು ಮಾಡಲೇ ಬೇಕು ಎಂಬ ಹಟಕ್ಕೆ ನಾ ಕಟ್ಟುಬಿದ್ದೆ, ಚಿತ್ರಕ್ಕೆ ಬಂಡವಾಳ ಹಾಕುವ ಗೆಳೆಯನನ್ನೆ ದುಷ್ಟ ಗೆಳೆಯನೊಬ್ಬ ಸಪಹರಿಸಿಬಿಟ್ಟ. ಇಂತಹ ಸಮಯದಲ್ಲಿ ಎನು ಮಾಡಬೆಕು ಎಂಬುದೇ ಅರ್ಥವಾಗುತ್ತಿರಲಿಲ್ಲ.
ನಾಗೋಸಾ ಸಿದ್ಲಿಂಗ್, ಕಾರಭಾರಿ ಎನೇ ಆಗಲಿ ಚಿತ್ರ ಮಾಡೊದೆ ನಾ ಯಾವತ್ತೂ ನಿಮ್ ಜೊತೆಗಿದ್ದೆನೆ, ತಲೆ ಹೋಳಾದರೂ ಪರವಾಗಿಲ್ಲ .ಸಿದ್ದತೆ ಮಾಡಿ ಅಂತ ಹುರಿದುಂಬಿಸಿದ.
ಬಂಡವಾಳವಿಲ್ಲ, ಚಿತ್ರೀಕರಣಕ್ಕೆ ಹಣವಿಲ್ಲ, ಇದ್ದ ಹಣವನ್ನು ತರಬೇತಿ ಅದು ಇದು ಅಂತ ಉಡಿಸ್ ಮಾಡಿದ್ದಾಯ್ತು, ಇನ್ನೆಲ್ಲಿಯ ಚಿತ್ರ ಅಂತ ಅನ್ಕೊಂಡೆ ಆದ್ರೆ ನನ್ನಲ್ಲುಳಿದ 10% ಗೆಳೆಯರು ಅನ್ನೊ ವಿಚಾರ ಮತ್ತೆ ಕೆದಕಲು ಸುರು ಆಯ್ತು,
ಆಗ ಹೊಳೆದಿದ್ದೆ ಅದ್ಬುತ ಆಲೊಚನೆ "ಜನಕ"
ನನ್ನ ಗೆಳೆಯನೊಬ್ಬ ಹೆಳಿದ ನಾಲ್ಕು ಸಾಲಿನ ಮಾತು
"ಅಪ್ಪ ಮಕ್ಕಳನ್ನು ಎಷ್ಟು ಪ್ರೀತಿಸ್ತಾರೆ" ಎಂಬ ವಿವರಣೆಯನ್ನು ನಾಲ್ಕು ಸಾಲಲ್ಲಿ ಹೆಳಿದ ಆ ನಾಲ್ಕು ಸಾಲುಗಳು ನಲವತ್ತು ಪುಟಗಳಾದವು ಕೊನೆಗೆ "ಜನಕ" ಕಿರುಚಿತ್ರ ಅಂತ ಆಲೊಚಿಸಿಕೊಂಡೆವು

ಕಿರುಚಿತ್ರದ ಆಲೊಚನೆ ಟೆಲಿಚಿತ್ರವಾಗಿ ಮಾರ್ಪಟ್ಟಿತು
ಮುಂದೆ ಟೆಲಿಚಿತ್ರ 2:30 ಘಂಟೆಯ ದೊಡ್ಡಚಿತ್ರವಾಗಿ ಸಿದ್ದವಾಗಲು ಆಲೊಚಿಸಿತು.

ಆಲೊಚನೆಗಳು ತನ್ನ ಪಾಡಿಗೆ ತಾನು ಆಲೊಚಿಸುತ್ತಲೇ ಇತ್ತು
ಜನಕ ಚಿತ್ರಕ್ಕಾಗಿ 10% ಗೆಳೆಯರು ಮತ್ತು ಇನ್ನುಳಿದ ಗೆಳೆಯರೊಂದಿಗೆ ಮಾತುಕತೆಗೆ ಸಿದ್ದವಾದೆ ಕೊನೆಗೆ
ಬಂಡವಾಳವಿಲ್ಲದೆ ಬಂಡವಾಳದ ಆಲೊಚನೆ ಮಾಡದೆ
ಜನಕ ಚಿತ್ರೀಕರಣ ಆರಂಬವಾಯ್ತು.
ಜನಕನಲ್ಲೂ ಅಡ್ಡಿಗಳು ಅಡ್ಡಗೊಡೆಮೆಲೆ ದೀಪವಿಟ್ಟಂತೆ ಬಂದೊದಗಿದವು.
ಈ ಮದ್ಯ ಗೆಳೆಯ ನಾಗೋಸಾ ಇವರಿಗೆ ಹೆಣ್ಣುಮಗುವಾಯ್ತು,
ಮನೆಯಲ್ಲಿ ಸಹಿಸಲಾಗದ ಅಕಲಾಟವಿದ್ದರೂ ಜನಕನ ಚಿತ್ರೀಕರಣದಲ್ಲಿ ನಗುಮೊಗದಿಂದ ಉತ್ಸಾಹದಿಂದ ತಲೆ ಗಟ್ಟಿಇದೆ ಎಂದು ಗೊಡೆಗೆ ಗುದ್ದಿಕೊಂಡ ನಾಗೋಸಾ ಜನಕ ಚಿತ್ರದ ನಿಜವಾದ ನಾಯಕ

ಪರಿಪೂರ್ಣವಾದ ಗೆಳೆತನ ಅಂದ್ರೆ ಎನು ಅಂತ ಜನಕನ ಮೂಲಕ ನನಗೆ ತಿಳಿಯಿತು

ಅಪ್ಪು, ರಾಜು,ದೀಪ, ಜಿಯಾ, ಚಿನ್ನು, ಸೌಮ್ಗ, ಪ್ರೀಯಾಂಕ ಇನ್ನೂ ಹಲವರು ತಮ್ಮ ಅತ್ಯಮೂಲ್ಯ ಸ್ನೇಹವನ್ನು
ಬಿಂಬಿಸಿದವರು
ಯಲ್ಲರ ಬಗ್ಗೆ ಜನಕನ ಅನುಭವ ಹಂಚಿಕೊಳ್ಳುತ್ತೆನೆ.

ಆದ್ರೆ ಒಂದ ಮಾತು
ಲವ್ ಯೂ ನಾಗು

ರಾ ದೇ ಕಾರಭಾರಿ 

ಜನಕನಿಗೂ ಮೊದಲು ಡುಬ್ ಚೆಂಡ್ ; ಡುಬ್ ಚೆಂಡ್ ಗೂ ಮೊದಲು ಜನಕ

ಡುಬ್ ಚೆಂಡ್ v/s ಜನಕ







ನಾನು ಮತ್ತು ನಮ್ಮ ಗೆಳೆಯರು ಸೆರಿ ನಾವೆಲ್ಲ ಸೇರಿ ಎನೋ ಒಂದು ಮಾಡಬೆಕು ಅಂತ ಆಲೊಚಿಸಿಕೊಂಡು "ಡುಬ್ ಚೆಂಡ್" ಚಿತ್ರದ ಪ್ರೇಮಕತೆಯನ್ನು ಸಿದ್ದಮಾಡಿಕೊಂಡೆವು ನಂತರದ ಬೆಳವಣಿಗೆಯಲ್ಲಿ ಚಿತ್ರ ಕಲಾವಿಧರನ್ನು ಹುಡುಕುವುದು ಗದಗ ಮತ್ತು ಸುತ್ತಮುತ್ತಲ್ಲಿರುವ ಗೆಳೆಯರನ್ನೆಲ್ಲ ಗುಡ್ಡೆಹಾಕಿ ಡುಬ್ ಚದರ ಚಂಡ್ ಬಗ್ಗೆ ಚರ್ಚಿಸಿದೆವು.
ಯಾರಿಗೂ ಕಲೆ ಗೊತ್ತಿಲ್ಲ ನಾವೂ ಸಹ ಹೊಸಬರು ಚಿತ್ರ ಮಾಡಬೆಕಂತಲ್ಲ ಎನೋ ಒಂದು ಮಾಡಬೆಕು ಅಂತ ಹಟ ತೊಟ್ಟಿದ್ದೆವು,
ಗದಗ, ಧಾರವಾಡ, ಬೆಳಗಾವಿ, ರಾಯಚೂರ, ಗಂಗಾವತಿ, ರಾಣೆಬೆನ್ನೂರ, ಮುಂಬೈ ಮುಂತಾದ ಪ್ರದೇಶಗಳಿಂದ ಕನಿಷ್ಟ 40/50 ಜನರನ್ನು ಗದಗಗೆ ಕರೆಯಿಸಿ ಗದುಗಿನ ತೊಂಟದಾರ್ಯ ಕಲ್ಯಾಣ ಮಂಟಪದಲ್ಲಿ ಒಂದು ವಾರಗಳ ಕಾಲ ತರಬೇತಿ ಆಯೊಜಿಸಿದೆವು
ರಂಗಾಯಣ ಮತ್ತು ನಿನಾಸಂ ನ ನಿರ್ದೇಶಕ ಶ್ರೀ ಗಣಪತಿ ಹೆಗಡೆಯವರು ನಮ್ಮ ತಂಡಕ್ಕೆ ಒಂದು ವಾರ ಕಾಲ ಕಲಾ ತರಬೇತಿ ನಿಡಿದರು
ತರಬೇತಿ ಅವದಿಯಲ್ಲಿ ಅದೂ ಇದು ಅಂತ ಸಾಕಷ್ಟು ಖರ್ಚಾಯ್ತು ತರಬೇತಿ ಮುಗಿಸಿ ಯಲ್ಲರಿಗೂ ಪ್ರಮಾಣಪತ್ರ ಕೊಟ್ಟೆವು ಆಗಲೆ ನಮ್ಮ ತಂಡದ ಮದ್ಯ ಒಂದು ಘಟಸರ್ಪ ಸೆರಿಕೊಂಡಿತು.
ಅವನೂ ಗೆಳೆಯನೇ ಆತ್ಮಿಯ ಸಹ ಆದರೆ ಯಲ್ಲಿ ನಾನು ಬೆಳೆದುಬಿಡ್ತೆನೆ ಅನ್ನೊ ಹೊಟ್ಟೆಕಿಚ್ಚಿರಬಹುದು ಅನ್ನಿಸುತ್ತೆ ನಮ್ಮ ತಂಡದಿಂದ ಒಂದೆರಡು ಗಟ್ಟಿಗರನ್ನು ಬಿಟ್ಟು ಯಲ್ಲರಿಗೂ ಎನೋ ಅಮಿಷ ತುಂಬಿ ತನ್ನತ್ತ ಸೆಳೆದುಕೊಂಡ ಡುಬ್ ಚೆಂಡ್ ಆಲ್ ಔಟ ಆಯ್ತು
ಯಾವುದೋ ದೊಡ್ಡ ಬ್ಯಾನರ ಚಲನಚಿತ್ರದಲ್ಲಿ ನಾಯಕನ ಪಾತ್ರ ಕೊಡಿಸ್ತೆನಂತ ನಮ್ಮಲ್ಲಿರುವ ಮುಖ್ಯವ್ಯಕ್ತಿಯನ್ನೆ ಅಪಹರಿಸಿಬಿಟ್ಟ ಆ ನನ್ನ ಗೆಳೆಯ.
ಡುಬ್ ಚೆಂಡ್ ಚಿತ್ರಕ್ಕೆ ಬಂಡವಾಳ ಹೂಡುವ ವ್ಯಕ್ತಿಯೇ ನಮ್ಮಿಂದ ಕಳಚಿಕೊಂಡುಬಿಟ್ಟ.
ಇನ್ನುಳಿದದ್ದು ನನ್ನನ್ನೇ ನಂಬಿದ ನನ್ನ ಆತ್ಮಿಯರು. ಅವರಿಗೆಲ್ಲ ಎನೋ ಒಂದು ಮಾಡೊಣ ಬನ್ನಿ ಅಂತ ಹುರಿದುಂಬಿಸಿದ್ದೆ ಅವರ ಮನಸ್ಸಿನೊಂದಿಗೆ ಆಟ ಆಡೊಕೆ ನನಗೆ ಮನಸಿಲ್ಲ ಸೋಲನ್ನು ಅಷ್ಟು ಸಲಿಸಾಗಿ ಒಪ್ಪಿಕೊಳ್ಳೊ ಜಾಯಮಾನವೂ ನನ್ನದಲ್ಲ ಯಲ್ಲರೂ ಹೋದಮೆಲೆ ಕಣ್ಣಿರು ಮಾತ್ರ ನನ್ನ ಪಾಲಾಯ್ತು.
ಮುಂದೆನು ಎಂದು ಆಕಾಶ ತಲೆಮೆಲೆ ಕಳಚಿಬಿದ್ದ ಅನುಭವ
ಆಗ ನನಗೆ ಬೆನ್ನಿಗೆ ಬೆನ್ನಾಗಿ ನಿಂತ ನನ್ನ ಆತ್ಮಿಯರು
ಯಾರು ಅವರೆಲ್ಲ ಎಂಬುದನ್ನು ಒಂದೊಂದಾಗಿ ವಿವರಿಸುತ್ತ ಹೊಗುತ್ತೆನೆ ಕೊನೆಗೆ ಡುಬ್ ಚೆಂಡ್ ಕ್ಲಿನ್ ಬೊಲ್ಡ ಆಯ್ತು "ಜನಕ" ಅನ್ನೊ ಕೌಟುಂಬಿಕ ಸೆಂಟಿಮೆಂಟ್ ಕಣ್ಣಿರ ಹರಿಸಲು ಸಜ್ಜಾಯ್ತು,
ನಾವು ಮಾಡುತ್ತಿರುವುದೆನು ಅನ್ನೊದು ನಮ್ಮ ತಂಡಕ್ಕೆ ಚನ್ನಾಗಿ ಗೊತ್ತು ಜನಕ ನಿಮ್ಮ ಮುಂದೆ ಬರಲು ಸಜ್ಜಾಗಿದ್ದಾನೆ ಅನ್ನೊದೊಂದೆ ಖುಷಿಯ ವಿಚಾರ

ರಾ ದೇ ಕಾರಭಾರಿ

ಜನಕನ ಬಗ್ಗೆ ಒಂದಿಷ್ಡು

ಜನಕ
ಇದು ಕೌಟುಂಬಿಕ ಚಲನಚಿತ್ರ ದಷಕಗಳ ನಂತರ ಕಣ್ಣಿರ ಹರಿಸಲು ಸಿದ್ದವಾಗುತ್ರಿರುವ ಚಿತ್ರ
ಚಿತ್ರನೊಡುಗರು ಅತ್ತು ಅತ್ತು ಹಣ್ಣಾಗುವುದಂತೂ ಗ್ಯಾರೆಂಟಿ

ಅಪ್ಪ ಮಕ್ಕಳ ಕತೆಯನ್ನಾಧಾರಿತ ಚಲನಚಿತ್ರ
ಅಮ್ಮನ ಕುರಿತು ಸಾಕಷ್ಟು ಚಿತ್ರಗಳಿವೆ ಜನಕ ಇದು ಅಪ್ಪನ ಕುರಿತ ಚಿತ್ರ
ಅಮ್ಮ ನವಮಾಸಗಳು ಮಕ್ಕಳನ್ನು ಗರ್ಬದಲ್ಲಿ ಹೊತ್ತುಕೊಂಡರೆ ಅಪ್ಪ ಆ ಮಗುವನ್ನು ಕೊನೆವರೆಗೂ ತನ್ನಲ್ಲೆ ಹೊತ್ತುಕೊಳ್ಳುವನು
ಜನಕ
ಚಿತ್ರ ಕಲಾವಿಧರಿಂದ ನಿರ್ಮಾಣಗೊಳ್ಳದೇ ಯಲ್ಲಾ ಹೊಸ ಮುಖಗಳು ಸೇರಿ ನಿರ್ಮಾಣ ಮಾಡಿದ್ದು
ಜನಕದಲ್ಲಿ ಯಲ್ಲರೂ ಮೊದಲ ಸಾರಿ ಅಭಿನಯಿಸಿದ್ದು
ಜನಕ ತಂಡ ಅಭಿನಯದ ಗಂಧವೇ ಗೊತ್ತಿಲ್ಲದವರು ಆದರೆ ಅಭಿನಯದ ಗಂದ ತಿಳಿದವರು ನಟಿಸಿದ ಚಿತ್ರ ನಿಮ್ಮ ಮನಗೆದ್ದುಕೊಳ್ಳುವುದಂತೂ ಶತಸಿದ್ದ
ಚಿತ್ರ ನಿರ್ಮಾಣಕ್ಕೆ ಸಾಕಷ್ಟು ಅಡ್ಡಿಗಳು ಬಂದವು ಆದರೆ ಆ ಯಲ್ಲ ಅಡ್ಡಗೋಡೆಗಳನ್ನು ಕೆಡವಿ ನಿಮ್ಮ ಮುಂದೆ ಬರಲು ಜನಕ ಸಿದ್ದವಾಹಿದ್ದಾನೆ.
ನಮಗೆ ಬೆಕಿರುವುದು ನಿಮ್ಮ ಪ್ರೀತಿ

ರಾ ದೇ ಕಾರಭಾರಿ

ಜನಕ ಚಲನಚಿತ್ರ

ಜನಕನಲ್ಲಿ ನಿಮ್ಮ ಕಾರಭಾರಿ ಕಾಣಿಸಿಕೊಂಡಿದ್ದು ಹಿಗೆ

ಜನಕ ಚಲನಚಿತ್ರ ಯಲ್ಲಾ ಹೊಸ ಮುಖಗಳನ್ನೇ ಹಾಕಿಕೊಂಡಿ ನಿರ್ಮಿಸಿದ ಚಿತ್ರ ಡುಬ್ ಚೆಂಡ್ ಚಿತ್ರದಲ್ಲಿ ಒಂದೇ ದೃಷ್ಯದಲ್ಲಿ ಕಳ್ಳ ಸ್ವಾಮಿಯ ಗೆಟಪ್ ನಲ್ಲಿ ಕಾಣಿಸಿಕೊಳ್ಳಬೆಕೆಂ...