Wednesday, October 24, 2018

ಜಿಯಾ v/s ರಜಿಯಾ ಕಾರಭಾರಿಯ ಮುದ್ದಿನ ಮಗಳು "ಜನಕ" ನಿಗಿವಳೇ ಕೆಂದ್ರಬಿಂದು

ಜಿಯಾ v/s ರಜಿಯಾ
ನಿಮ್ಮ ಕಾರಭಾರಿಯ ಮುದ್ದಿನ ಮಗಳು,
ಜನಕ ಚಲನಚಿತ್ರದಲ್ಲಿಯೂ ಇವಳೇ ಕೆಂದ್ರಬಿಂದು.
ಬಾಲ್ಯದಿಂದಲೂ ನನ್ನ ಕೈಲಿ ಬೆಳೆದವಳು ನಾ ಎತ್ತಿ ಆಡಿಸಿದ ಹುಡುಗಿ, ನನ್ನ ಆತ್ಮೀಯ ಗೆಳೆಯ ಸೈಯದ್ ನ ತಂಗಿ ಮಗಳು.
ಸೈಯದ ಕಿಲಾಡಿ ನನ್ಮಗ ಆದ್ರೆ ನನ್ ಜೀವದ ಗೆಳೆಯ, ನಾನೂ ಮತ್ತು ಅವನು ಸೇರಿ ಮಾಡದ ಕಿಲಾಡಿ ಕೆಲಸಗಳೇ ಇಲ್ಲ. ಗೆಳೆಯ ಸೈಯದ್ ಈಗ ನಮ್‌ ಜೊತೆ ಇಲ್ಲ ಅವನು ಇದ್ದಿದ್ದರೆ ಖುಷಿಪಡ್ತಿದ್ದ, ನನ ಗೆಳೆಯನ ಮಗಳು ನನ್ನ ಮಗಳು ಜನಕನಲ್ಲಿ ನನ್ನ ಮಗಳೇ ಹಿರೊಯಿನ್.
ನಾನು ನನ್ ಮಗಳು ಚಿತ್ರ ನಿರ್ಮಾಣಕ್ಕಾಗಿ ವರ್ಷಾನುಗಟ್ಟಲೇ ಓಡಾಡಿದೆವು.
ಡುಬ್ ಚೆಂಡ್ ಚಿತ್ರ ನಿರ್ಮಾಣಕ್ಕೆ ಸಜ್ಜು ಮಾಡಿಕೊಂಡು ನಾನು ನನ್ ಮಗಳು ಹಗಲು ರಾತ್ರಿ ಯನ್ನದೆ ತಿರುಗಿದ್ದೆ ತಿರುಗಿದ್ದು.


ಡುಬ್ ಚೆಂಡ್ ಆಡಿಷನ್ ನಿಂದ ಹಿಡಿದು ತರಬೇತಿ ಆಡಿಯೊ ರಿಲಿಜ್ ಹಿಗೆ ಎಲ್ಲಾ ಕಡೆಯೂ ಊಟ ನೀರು ಬಿಟ್ಟು ತಿರುಗಿ ತಿರುಗಿ ಉತ್ದಾಹದಿಂದ ಡುಬ್ ಚೆಂಡ್ ಚಿತ್ರದ ಚಿತ್ರೀಕರಣದ ವ್ಯವಸ್ಥೆ ಮಾಡಿಕೊಂಡ ಮೆಲೆ ನಮ್ ತಂಡದಲ್ಲಿ ಹಿಂಬಾಗಿಲಿನಿಂದ ಸೇರಿಕೊಂಡ ಗದುಗಿನ ಪತ್ರಕರ್ತನೊಬ್ಬನ ಹೊಟ್ಟೆಯುರಿಗೆ ಇಡಿ ತಂಡವೇ ಕೈಕೊಟ್ಟು ಹೊದಾಗ ಹೆಬ್ಬಂಡೆ ತಲೆಮೆಲೆ ಬಿದ್ದವರ ತರಹ ಕುಳಿತ ನನಗೆ ಸಮಾಧಾನ ಮಾಡಿದವಳು ನನ್ ಮುದ್ದು ಮಗಳು ಜಿಯಾ.
ಇನ್ನೆನು ಚಿತ್ರದ ಕನಸು ನುಚ್ಚಾಯ್ತು ಅಂದುಕೊಂಡಾಗ "ಎನಾಗಲಿ ಮುಂದೆ ಸಾಗೊಣ, ನಂಬಿದವರೆಲ್ಲ ನಂಬಿಗಸ್ತರಲ್ಲ ಈ ಬಾಳಲಿ, ಸೂರ್ಯ ಮುಳುಗಿದಾಕ್ಷಣ ಅದು ಶಾಶ್ವತ ಕತ್ತಲಲ್ಲ ಬೆಳಿಗ್ಗೆ ಮತ್ತೆ ಸೂರ್ಯ ಉದಯಿಸಲೇ ಬೆಕು, ಟಿಮ್ ಕೈಕೊಟ್ಟಿದ್ದು ಕೇವಲ ಸೂರ್ಯನಿಗೆ ಅಡ್ಡವಾದ ಮೋಡದಂತೆ, ಸೂರ್ಯ ತನ್ನ ಪ್ರಕಾಶವನ್ನು ಯಾವತ್ತೂ ನಿಲ್ಲಿಸೊಲ್ಲ ಎಂಬಂತಹ ಮಾತುಗಳ ಮೂಲಕ ನನಗೆ ಮರು ಉತ್ತೆಜನ ನಿಡಿದಳು ನನ್ ಮುದ್ದು ಮಗಳು ಜಿಯಾ.
ಜನಕ ಚಿತ್ರದಲ್ಲಿ ನಾಯಕಿಯ ಪಾತ್ರ ಚಿತ್ರದಲ್ಲಿಯೂ ನನ್ ಮಗಳ ಪಾತ್ರ ನಿರ್ವಹಿಸುತ್ತಿದ್ದಾಳೆ ಜಿಯಾ.
ಕಾರಭಾರಿ ಮೊಷನ್ಸ ಸಂಸ್ಥೆಯ ನಿರ್ಮಾಣದ ನಮ್ಮ ಮುಂದಿನ ಚಿತ್ರಗಳಾದ
*ಡುಬ್ ಚೆಂಡ್" ನಲ್ಲಿ ನಾಯಕಿಯಾಗಿ
*ದೇವಸೂಳೆ" ನಲ್ಲಿಯೂ ನಾಯಕಿಯಾಗಿ ಅಭಿನಯಿಸುತ್ತಿದ್ದಾಳೆ,
ಚಲನಚಿತ್ರ ಜಗತ್ತಿಗೆ ಒಂದು ಉದ್ಬುತ ನಾಯಕಿಯನ್ನು ಪರಿಚಯಿಸಿತ್ತಿದೆ ಕಾರಭಾರಿ ಸಂಸ್ಥೆ

ಲವ್ ಯೂ ಮಗಳೆ


No comments:

Post a Comment

ಜನಕನಲ್ಲಿ ನಿಮ್ಮ ಕಾರಭಾರಿ ಕಾಣಿಸಿಕೊಂಡಿದ್ದು ಹಿಗೆ

ಜನಕ ಚಲನಚಿತ್ರ ಯಲ್ಲಾ ಹೊಸ ಮುಖಗಳನ್ನೇ ಹಾಕಿಕೊಂಡಿ ನಿರ್ಮಿಸಿದ ಚಿತ್ರ ಡುಬ್ ಚೆಂಡ್ ಚಿತ್ರದಲ್ಲಿ ಒಂದೇ ದೃಷ್ಯದಲ್ಲಿ ಕಳ್ಳ ಸ್ವಾಮಿಯ ಗೆಟಪ್ ನಲ್ಲಿ ಕಾಣಿಸಿಕೊಳ್ಳಬೆಕೆಂ...